1 / 5
2 / 5
3 / 5
4 / 5
5 / 5

 ಸಂಘದ ಆರ್ಥಿಕ ಪ್ರಗತಿಯ ಪಕ್ಷಿನೋಟ

ಉಜ್ವಲ ಭವಿಷ್ಯ

(ದಿನಾಂಕ 31.03.2023ಕ್ಕೆ ಇದ್ದಂತೆ)

ದು. ಬಂಡವಾಳ 1883.79 Lakh
ಠೇವಣಿಗಳು 997.92 Lakh
ಸಾಲಗಳು 1121.53 Lakh
ಸದಸ್ಯರು 751

 ಠೇವಣಿಗಳು

ತಮ್ಮ ಹಣದ ರಕ್ಷಣೆ ನಮ್ಮ ಹೊಣೆ

ಠೇವಣಿ ಮೇಲಿನ ಆಕರ್ಷಕ ಬಡ್ಡಿ ದರಗಳು:

90 ದಿವಸಗಳಿಂದ 179 ದಿವಸಗಳವರೆಗೆ 5.00%
180 ದಿವಸಗಳಿಂದ 1 ವರ್ಷದೊಳಗೆ 6.00%
1 ವರ್ಷಕ್ಕೂ ಮೇಲ್ಪಟ್ಟು 7%

 ಸಾಲ ಮತ್ತು ಮುಂಗಡಗಳು

ಸದಸ್ಯರ ಸರ್ವತೋಮುಖ ಅಭಿವೃದ್ಧಿಗಾಗಿ ಆರ್ಥಿಕ ಸಹಾಯ

ಸಾಲದ ಮೇಲಿನ ಬಡ್ಡಿ ದರಗಳು :

ಜಾಮೀನು ಸಾಲ ರೂ. 5 ಲಕ್ಷದ ವರೆಗೆ 9.00%
ಅಡಮಾನ ಸಾಲ ರೂ. 6 ಲಕ್ಷದ ವರೆಗೆ 8.00%

ಸದಸ್ಯರ ಹಾಗೂ ಠೇವಣಿದಾರರ ನಂಬಿಕೆ ಮತ್ತು ವಿಶ್ವಾಸವೆ ಸಂಘದ ಮುನ್ನಡೆಗೆ ಶ್ರೀರಕ್ಷೆ

ಬೆಂಗಳೂರು ವಿಶ್ವವಿದ್ಯಾಲಯ ನೌಕರರ ಸಾಲ ಸಹಕಾರ ಸಂಘ(ನಿ)ವು 'ಎಲ್ಲರಿಗಾಗಿ ತಾನು ತನಗಾಗಿ ಎಲ್ಲರು' ಎಂಬ ಸಹಕಾರ ಧ್ಯೇಯೋದ್ದೇಶದೊಂದಿಗೆ ಬೆಂಗಳೂರು ವಿಶ್ವವಿದ್ಯಾಲಯದ ಶಿಕ್ಷಕ ಮತ್ತು ಶಿಕ್ಷಕೇತರ ನೌಕರರಿಂದ ಸ್ಥಾಪನೆಗೊಂಡಿದೆ. ನಮ್ಮ ಸಂಘವು ಸಹಕಾರದ ಮೂಲ ತತ್ವದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಸುಮಾರು 48 ವರ್ಷಗಳ ಇತಿಹಾಸವುಳ್ಳದ್ದಾಗಿರುತ್ತದೆ. ನಮ್ಮ ಸಂಘವು ಬೇರೆ ಸಹಕಾರ ಸಂಘಗಳಂತೆ ಸದಸ್ಯರಿಗೆ, ಆರ್ಥಿಕ ಮತ್ತು ಸಾಮಾಜಿಕ ನೆರವು ನೀಡುತ್ತಿರುತ್ತದೆ. ಸಂಘವು ತನ್ನ ಹಣಕಾಸಿನ ಎಲ್ಲಾ ವ್ಯವಹಾರಗಳನ್ನು ಗಣಕೀಕೃತಗೊಳಿಸಿದ್ದು, ಸದಸ್ಯರ ಪ್ರತಿ ಹಣಕಾಸಿನ ವ್ಯವಹಾರಕ್ಕೂ SMS ಸಂದೇಶಗಳನ್ನು ಅವರ ಮೊಬೈಲಿಗೆ ರವಾನಿಸಲಾಗುತ್ತಿದೆ .

ಸಂಘವು ಸದಸ್ಯರಿಗೆ ಹಾಗೂ ಠೇವಣಿದಾರರ ಉತ್ತಮ ಸೇವೆಯನ್ನು ನೀಡಲು ಸಹಕಾರಿ ಸ್ನೇಹಿ ಸಿಬ್ಬಂದಿ ವರ್ಗವನ್ನು ಹೊಂದಿದೆ, ಇವರು ಸದಸ್ಯರು ಹಾಗೂ ಠೇವಣಿದಾರರೊಡನೆ ಆತ್ಮೀಯವಾಗಿ ವರ್ತಿಸಿ ಉತ್ತಮ ವಾತಾವರಣ ನಿರ್ಮಿಸಿಕೊಂಡಿರುವುದೂ ಸಹ ಸಂಘದ ಬೆಳವಣಿಗೆಗೆ ಪೂರಕವಾಗಿದೆ ಎಂದು ಭಾವಿಸುತ್ತೇನೆ. ಸಂಘದಲ್ಲಿ ಠೇವಣಿಯನ್ನು ಹೂಡಲು ಸದಸ್ಯರು ಯಾರನ್ನು ಒತ್ತಾಯಿಸಬೇಕೆಂದೇನಿಲ್ಲ; ಅವರೇ ಸ್ವಯಂ ಪ್ರೇರಣೆಯಿಂದ ಅತ್ಯಂತ ಉತ್ಸಾಹದಿಂದ ಇತರೆ ಸಹಕಾರ ಸಂಘಗಳು / ಬ್ಯಾಂಕುಗಳ ಆಶೋತ್ತರಗಳಿಗೂ ಕಿವಿಗೊಡದೆ ನಮ್ಮಲ್ಲಿಯೇ ಠೇವಣಿ ಹೂಡಿರುತ್ತಾರೆ. ಇದುವೇ ಸಂಘದ ವ್ಯಾವಹಾರಿಕ ಮುನ್ನಡೆಗೆ ಸಾಕ್ಷಿಯಾಗಿದೆ.

ಸಂಘದ ಅಧ್ಯಕ್ಷನಾಗಿ ಕರ್ತವ್ಯ ನಿರ್ವಯಿಸಲು ನನ್ನನ್ನು ನಿಯೋಜಿಸಿರುವ ಪ್ರಸ್ತುತ ಕಾರ್ಯಕಾರಿ ಮಂಡಳಿ ನಿರ್ದೇಶಕರು, ಸಂಘದ ಸದಸ್ಯರು ಹಾಗೂ ನನಗೆ ನಮ್ಮ ಸಂಘದ ವಿತ್ತೀಯ ಸೂಕ್ಷ್ಮಗಳನ್ನು ಅರಿತುಕೊಳ್ಳಲು ಸಹಕಾರಿಯಾಗಿರುವ ಕಚೇರಿ ಸಿಬ್ಬಂದಿ ವರ್ಗಕ್ಕೂ ನಾನು ಸದಾ ಚಿರಋಣಿ ಮತ್ತು ಕೃತಜ್ಞನಾಗಿರುತ್ತೇನೆ.

ಸಂಘವು ಪ್ರಾರಂಭದಿಂದ ಇಂದಿನವರೆವಿಗೂ ಆರ್ಥಿಕ ಶಿಸ್ತನ್ನು ರೂಢಿಸಿಕೊಂಡು ಬಂದಿರುತ್ತದೆ. ಸಂಘದಲ್ಲಿನ ಲೆಕ್ಕಪತ್ರಗಳ ಪಾರದರ್ಶಕತೆ ಹಾಗೂ ಪ್ರಾಮಾಣಿಕತೆಯು ಸಂಘದ ಸದೃಢ ನಿರ್ವಹಣೆ ನಮಗೆ ಅನುವು ಮಾಡಿಕೊಟ್ಟಿದೆ ಎಂದು ಹೆಮ್ಮೆಯಿಂದ ನೆನೆಯುತ್ತೇನೆ. ಒಟ್ಟು ಕುಟುಂಬದಂತೆ ಒಗ್ಗಟ್ಟಿನಿಂದ ಕಾರ್ಯನಿರ್ವಯಿಸುತ್ತಿರುವ ಫಲವಾಗಿ ನಮ್ಮ ಸಂಘವು ಆರ್ಥಿಕವಾಗಿ ಮುನ್ನಡೆ ಹೊಂದುತ್ತ ಬಂದಿರುತ್ತದೆ. ಸಂಘವು ಸಹಕಾರ ವಲಯದಲ್ಲಿನ ನೂತನ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳಲು ಸದಾ ತೆರೆದ ಮನಸ್ಸಿನಿಂದ ಶಿಸ್ತಿನ ಸಿಫಾಯಿಯಂತೆ ಸಜ್ಜಾಗಿ ನಿಂತಿದೆ. ದಕ್ಷ, ಪ್ರಾಮಾಣಿಕ ಮತ್ತು ಕಾರ್ಯಶೀಲ ಗುಣವೇ ನಮ್ಮ ಸಂಘದ ಮುನ್ನಡೆಗೆ ಪ್ರಮುಖ ಕಾರಣವಾಗಿದೆ. "ಸಹಕಾರವೇ ಸಕಲ ಜೀವಕಾಧಾರ" ಎಂಬ ಧ್ಯೇಯ ವಾಕ್ಯವೇ ಈ ಸಂಘದ ಶ್ರೀರಕ್ಷೆಯಾಗಿದೆ.


ಶ್ರೀ ಹೆಚ್. ಕೃಷ್ಣಪ್ಪ
             ಅಧ್ಯಕ್ಷರು